ಬಾಸ್ಕಮ್, ವಿಲಿಯಮ್ ರಸ್ಸೆಲ್
1912_81. ಮಾನವಶಾಸ್ತ್ರಜ್ಞ. ಹುಟ್ಟಿದ್ದು ಪ್ರಿನ್‍ಸ್ಟನ್ನಿನಲ್ಲಿ, 1912 ಮೇ 23ರಂದು. ಬಿ.ಎ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯ 1933; ಎಂ.ಎ. 1936; ಪಿಎಚ್.ಡಿ. ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯ 1939. ಓಕ್ಲಹೋಮ್ ಪ್ರದೇಶದಲ್ಲಿಯ ಕಿಯೋವ ಇಂಡಿಯನ್ನರ ಬಗ್ಗೆ 1935ರಲ್ಲೂ ನೈಜೀರಿಯದ ಯೋರುಬರ ಬಗ್ಗೆ 1939ರಲ್ಲೂ ಕ್ಷೇತ್ರ ಕಾರ್ಯ ನಡೆಸಿದ. ಅಲ್ಲದೆ ದಕ್ಷಿಣ ಕರೋಲಿನದ ನೀಗ್ರೋಗಳ ಬಗ್ಗೆಯೂ ಅಧ್ಯಯನ ಮಾಡಿದ್ದಾನೆ. 1942-45ರ ತನಕ ಅಮೆರಿಕ ಸರ್ಕಾರದ ನೌಕರನಾಗಿ ನೈಜೀರಿಯ ಮತ್ತು ಗೋಲ್ಡ್ ಕೋಸ್ಟ್‍ಗಳಲ್ಲಿ ಸೇವೆ ಸಲ್ಲಿಸಿದ. 1946ರಲ್ಲಿ ಮೊನೇಪ್ ಉತ್ತರ ಕರೋಲಿನ ದ್ವೀಪಗಳಲ್ಲೂ 1948ರ ಬೇಸಗೆಯಲ್ಲಿ ಕ್ಯೂಬಾದಲ್ಲೂ ಕಾರ್ಯ ನಿರ್ವಹಿಸಿದ. 1946ರಲ್ಲಿ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದ.

	ಪ್ರಕಟಣೆಗಳು: ದಿ ಸೋಷಿಯಾಲಾಜಿಕಲ್ ರೋಲ್ ಆಫ್ ದಿ ಯೋರುಬ ಕಲ್ಟ್ ಗ್ರೂಪ್ (ಮೆಮೈರ್ 63, ಆಮೆರಿಕನ್ ಆಂತ್ರೋಪಾಲಾಜಿಕಲ್ ಅಸೋಸಿಯೇಷನ್); ದಿ ರೀಲೇಷನ್ ಶಿಪ್ ಆಫ್ ಯೋರುಬ ಫೋಕ್ ಲೋರ್ ಟು ಡಿವೈನಿಂಗ್ ಮತ್ತು ಲಿಟರರಿ ಸ್ಟೈಲ್ ಇನ್ ಯೋರುಬ ರಿಡಲ್ಸ್ (ಜರ್ನಲ್ ಆಫ್ ಅಮೆರಿಕನ್ ಫೋಕ್ ಲೋರ್); ದಿ ಪ್ರಿನ್ಸಿಪಲ್ ಆಫ್ ಸೀನಿಯಾರಿಟಿ ಇನ್ ದಿ ಸೋಷಿಯಲ್ ಸ್ಟ್ರಕ್ಚರ್ ಆಫ್ ದಿ ಯೋರುಬ (ಅಮೆರಿಕನ್ ಆಂತ್ರೋಪಾಲಜಿಸ್ಟ್)-ಮುಂತಾದವು.

	1981 ಸೆಪ್ಟಂಬರ್ 11ರಂದು ನಿಧನನಾದ. 							*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ